ಈ ಕೃತಿಯು ಅಂತರಂಗ ಮತ್ತು ಬಹಿರಂಗ ಶುದ್ಧಿಯುಳ್ಳ ಮಹಾತ್ಮರ ರೂಪದಲ್ಲಿ ಪ್ರವಾದಿ ಮುಹಮ್ಮದ್(ಸ)ರನ್ನು ಪರಿಚಯಿಸುತ್ತದೆ. ಇಸ್ಲಾಮ್ ಮತ್ತು ಪ್ರವಾದಿ ಮುಹಮ್ಮದ್(ಸ)ರ ಉದಾತ್ತ ಚಿಂತನೆಗಳನ್ನು ಪರಿಚಯಿಸುವ ಆಗ್ರಹವನ್ನು ಹೊಂದಿರುವ ಈ ಕೃತಿ, ಸಾಮಾಜಿಕ ಸೌಹಾರ್ದವನ್ನು ಹಂಬಲಿಸುವ ಎಲ್ಲರಿಗೂ ಆಪ್ಯಾಯಮಾನ ಅನುಭವ ನೀಡುವಂತಹದ್ದು. ಸಮಾಜದ ಆರೋಗ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಇತರ ಧರ್ಮಗಳಂತೆಯೇ ಇಸ್ಲಾಮ್ ಕೂಡ ಜೀವಪರ ಹಾಗೂ ಸೃಜನಶೀಲವಾಗಿರುವುದನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಆಶಯದಲ್ಲಿನ ಪ್ರಾಮಾಣಿಕತೆಯಿಂದಾಗಿ ಈ ಕೃತಿಯು ಧಾರ್ಮಿಕ ಸಾಮರಸ್ಯದ ಮಾದರಿಯೊಂದನ್ನು ಸಹೃದಯರ ಮುಂದಿಡುತ್ತದೆ.
Ratings & Reviews
Login account to write review
Login0.00
Average Rating- (0.00)
